ಹೋಂ/ಗೃಹ  |  Language Option  |  ಡೌನ್ ಲೋಡ್  |  ಆಗಾಗಿನ ಸ್ಪಂದನಾ ಪ್ರಶ್ನಾವಳಿ-ಎಫ್ ಎ ಕ್ಯು  |  Help Manual  |  ಸಂಪರ್ಕಿಸಿ (ಹೊಸ ಟೋಲ್‌ ಫ್ರೀ ದೂರವಾಣಿ ಸಂಖ್ಯೆ)  |  Site Map  
 
 
ಭಾರತೀಯ ಭಾಷೆಗಳಿಗಾಗಿ ತಂತ್ರಜ್ಞಾನದ ವಿಕಾಸ
 
ಪ್ರಸ್ತುತ ಕಾಲಘಟ್ಟದಲ್ಲಿ ಲಭ್ಯವಿರುವ ಮಾನವ ಯಂತ್ರ ಅಂತರ್ ವ್ಯವಹಾರಗಳಲ್ಲಿ ಕಂಡುಬರುವ ವಕ್ರಗತಿ ಮಾನವನಿಗಿಂತ ಯಂತ್ರಗಳಿಗೇ ಅನುಕೂಲಕರ. ಮೌಸ್ ಮತ್ತು ಕೀ ಬೋರ್ಡ್ ನ ಪ್ರಾಥಮಿಕ ಉಪಕರಣಗಳೇ ಇನ್ ಪುಟ್ (ಪ್ರದಾನ) ಮತ್ತು ಔಟ್ ಪುಟ್ (ಆದಾನ) ಉಪಕರಣಗಳು. ಈ ಅಂತರ್ ವ್ಯವಹಾರಗಳಿಗೆ ಅತ್ಯಾವಶ್ಯಕ ಗುಣಗಳು ಪ್ರತಿಭೆ ಹಾಗೂ ಮನೋಸ್ಥಿತಿ. ಇವು ಹೆಚ್ಚು ಜನರಿಗೆ ಲಭ್ಯವಿಲ್ಲ. ಈ ರೀತಿಯ ಯಂತ್ರ ಕೇಂದ್ರಿತ ವ್ಯವಹಾರಗಳ ಪರಿವರ್ತನೆಯಾಗಿ ಮಾನವ ಕೇಂದ್ರಿತ ವ್ಯವಹಾರಗಳು ಮೇಲುಗೈ ಸಾಧಿಸಿದರೆ ಜನ ಸಾಮಾನ್ಯರಿಗೆ ಕಂಪ್ಯೂಟರ್ದ ಪ್ರಭಾವ ಅನುಕೂಲಕರವಾಗುವುದು. ಮಾಹಿತಿ ಸಂಗ್ರಹದಲ್ಲಿ ದೃಶ್ಯ ಮಾಧ್ಯಮ ಪ್ರಭಾವಶಾಲಿಯಾದರೆ, ಮಾಹಿತಿ ವಿತರಣೆಗೆ ವಾಕ್ ಮೂಲವೇ ಅತಿಯಾಗಿ ಆಯ್ದ ಹಾದಿ. ವಾಕ್ ಸಂಚಾರ ಇಂದು ಬಲಿಷ್ಠವಾಗಲು ಕಾರಣ ಕಂಪ್ಯೂಟರ್ಗಳ ಏಕಾಗ್ರಮುಖತೆ ಹಾಗೂ ದೂರಸಂಚಾರ ವ್ಯವಸ್ಥೆ. ಹಾಗಾಗಿ ದೇಶದ ಯಾವುದೇ ಮೂಲೆಯಲ್ಲಿ ಅಳವಡಿಸಿದ ಕಂಪ್ಯೂಟರ್ದ ಮೂಲ ಅವಶ್ಯಕತೆಗನುಸಾರವಾಗಿ ಯಾವುದೇ ಮಾಹಿತಿ ಲಭ್ಯವಾಗುವುದು.

ಶಾಬ್ದಿಕ ಸಂಚಾರವು ಸ್ವಾಭಾವಿಕ ಭಾಷೆಯನ್ನು ಒಳಗೊಂಡ ಕಾರಣ ಮಾಹಿತಿ ತಂತ್ರಜ್ಞಾನದಲ್ಲಿ ಭಾಷಾ ಶಾಸ್ತ್ರದ ಪಾತ್ರ ಮುಖ್ಯವಾಗುವುದು. ಹಾಗಾಗಿ ಮಾನವ ಕೇಂದ್ರಿತ ಕಂಪ್ಯೂಟರ್ದ ಉಪಲಬ್ಧ ಹಾಗೂ ಉಪಯೋಗ ಇಂದು ಅವಶ್ಯಕ. ಭಾಷೆಯ ವಿಶೇಷ ಸಹಜ ಶಕ್ತಿ ಮಾನವನಗಿರುವುದರಿಂದ ಪರಸ್ಪರ ಸಂಚಾರ, ಮಾಹಿತಿ ವಿನಿಮಯ, ಆಲೋಚನಾ ಯೋಜನೆಗಳು ಶ್ರಮರಹಿತವಾಗಿ ಜರುಗುತ್ತಿವೆ. ಮಾನವ ಯಂತ್ರ ವ್ಯವಹಾರಗಳ ಸಾಧ್ಯತೆಯಲ್ಲಿ ಸ್ವಾಭಾವಿಕ ಭಾಷೆಯ ಅವಲಂಬನೆಯಿಂದಾಗಿ ಭಾಷಾ ತಂತ್ರಜ್ಞಾನದ ಹಲವಾರು ಪ್ರಾಕಾರಗಳು ಅವಶ್ಯಕವಾಗಿವೆ: ವಾಕ್ ಸಂಕೋಚನೆ, ಅಂಗೀಕರಣ, ವಾಕ್-ಲಿಪಿ ಗ್ರಹಣ, ಲಿಪಿ, ಯಾಂತ್ರಿಕ ಅನುವಾದ, ಮೂಲ ಪಾದ ಉತ್ಪತ್ತಿ, ವಾಕ್ ಸಂಷ್ಲೇಶಣೆ ಹಾಗೂ ಮೋಡಿ ಬರವಣಿಗೆ. ಭಾಷೆಯ ಲಿಪಿ ಹಾಗೂ ಮಾತಿನ ಪ್ರಾಕಾರಗಳು ಕಂಪ್ಯೂಟರ್ದೊಡನೆ ವ್ಯವಹಾರಗಳಿಗೆ ಉಪಯೋಗಕರ.
ಕಳೆದ ಎರಡು ದಶಕಗಳಿಂದ ಭಾರತೀಯ ಭಾಷೆಗಳ ಗಣಕೀಕರಣ ಜಾರಿಯಲ್ಲಿದೆ. ಹಾಗಾಗಿ ಕೆಳಕಂಡ ವಿವಿಧ ಸಾಧನಗಳೂ ಕೂಡ: ಮಾಹಿತಿ ಸಂಗ್ರಹಣೆ ಹಾಗೂ ಸಂಸ್ಕರಣೆ, ಪದ ಸಂಸ್ಕರಣೆ, ಡೆಸ್ಕ್ ಟಾಪ್ ಪ್ರಕಟಣೆ ಹಾಗೂ ಇತರೆ. ಇವನ್ನೆಲ್ಲಾ ವಿವಿಧ ಪ್ಲಾಟ್ ಫಾರಂ ಹಾಗೂ ಆಪರೇಟಿಂಗ್ ಸಿಸ್ಟಮ್ ಮೂಲಕ ಸಾಧಿಸಲಾಗಿದೆ.

ಯಾವುದೇ ತಡೆ ಇಲ್ಲದೆ ವಿವಿಧ ಭಾಷಾ ಉಪಕರಣ ಉಪಲಬ್ಧ ಮಾಡುವ ಮೂಲಕ ಭಾರತೀಯ ಭಾಷಾ ತಂತ್ರಜ್ಞಾನ ವಿಭಾಗವು ಮಾನವ ಯಂತ್ರ ವ್ಯವಹಾರಗಳನ್ನು ಸುಗಮವಾಗಿಸಲು ಬಹುಭಾಷಾ ಜ್ಞಾನ ಸಂಪನ್ಮೂಲಗಳನ್ನು ಒದಗಿಸಿದೆ. ಹಲವು ಯೋಜನೆ, ಧನರಾಶಿ, ಭಾಷಾ ಶಾಸ್ತ್ರ ಸಂಬಂಧಿತ ಶಬ್ದಕೋಶ, ಕಾರ್ಪೊರ, ಮೂಲ ಮಾಹಿತಿ ಪರಿಷ್ಕರಣ, ಉಪಕರಣಗಳಿಂದ ಫಾಂಟ್ಸ್, ಮೂಲ ಲಿಪಿ ಸಂಪಾದನೆ, ಲಿಪಿತಾಳೆ, ಓಸಿಆರ್ ಹಾಗೂ ಪಠ್ಯ-ವಾಣಿ ಸಂಭೋಧನಾ ಸಲಕರಣೆಗಳನ್ನೂ ಸಹ ಒದಗಿಸಿತು. ಅಂತೆಯೇ, ಗುಣವತ್ತತೆಯೂ ಬೆಳೆಯಿತು.

ಸರ್ಕಾರೀ, ಸಾರ್ವಜನಿಕ ಹಾಗೂ ಖಾಸಗೀ ಮಟ್ಟದಲ್ಲಿ ಅನೇಕ ಕ್ರೋಢೀಕೃತ ಶ್ರಮಗಳ ಪರಿಣಾಮವಾಗಿ ಭಾಷಾ ತಂತ್ರಜ್ಞಾನದ ಉತ್ಪನ್ನಗಳೂ, ಸೇವೆ ಸಹಿತ ಲಭ್ಯವಾಯಿತು. ಸಮಾಜದಲ್ಲಿ ಇವು ಪ್ರಭಾವಕಾರಿಯಾಗಲು ಭಾಷಾ ತಂತ್ರಜ್ಞಾನ, ವಿಕಸಿತ ಉಪಕರಣಗಳ ಉಪಯೋಗ ಕುರಿತು ಜನಸಾಮಾನ್ಯರ ಪ್ರತಿಕ್ರಿಯೆ ಕುರಿತು ಸಂಪನ್ಮೂಲ ಕೇಂದ್ರ ಹಾಗೂ ಕಾಯಿಲ್ ನೆಟ್ ಕೇಂದ್ರಗಳು ಕ್ರೋಢೀಕರಿಸಬೇಕಾಗಿದೆ. ಅಂದರೆ, ವಿಕಾಸ ಶೀಲ ಕ್ರಮಗಳು ಕೇವಲ ಪ್ರಯೋಗಾಲಯಗಳಿಗೆ ಸೀಮಿತವಾಗಲೇ ಬಾರದು. ಇವುಗಳ ಹರವು ಹೆಚ್ಚಿದಂತೆ ಪ್ರತಿಕ್ರಿಯೆ ಹಾಗೂ ಅನುಭವ ಸಹ ಹೆಚ್ಚುವುದು.

ಈ ನಿಟ್ಟಿನಲ್ಲಿ ಸರಕಾರವು ಪ್ರಸ್ತುತ ವರುಷದಲ್ಲಿ ತತ್ಸಂಬಂಧ ಸಂಸಾಧನಗಳನ್ನು ಒದಗಿಸುವುದು.
  ಉಚಿತ ಫಾಂಟ್ (ಟಿಟಿಎಫ್ ಹಾಗೂ ಓಟಿಎಫ್) ಮತ್ತು ಅನ್ಯ ಭಾಷೆಗಳಲ್ಲಿ ಲಿಪಿ ಸಂಸ್ಕರಣೋತ್ಪನ್ನಗಳು. ಮೊದಲ ಹಂತದಲ್ಲಿ ಟ್ರೂ ಟಾಯಿಪ್ ಫಾಂಟ್ಸ್ (ಟಿಟಿಎಫ್)ಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಪ್ರಕಾಶಕರ ಮೂಲಕ ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಲಭ್ಯವಾಗಿವೆ. ವಿಂಡೋಸ್ 95/ ವಿಂಡೋಸ್ 98/ವಿಂಡೋಸ್ NT ವ್ಯವಸ್ಥೆಗಳಲ್ಲಿ ಟಿಟಿಎಫ್ ಫಾಂಟ್ ಗಳನ್ನು ವ್ಯಾಪಕವಾಗಿ ಉಪಯೋಗಿಸುವರು. ವಿಂಡೋಸ್ 2000/XP/2003 ಹಾಗೂ ಲೈನೆಕ್ಸ್ ವ್ಯವಸ್ಥೆಗಳಿಗಾಗಿ ಓಟಿಎಫ್ (ಓಪನ್ ಟಾಯಿಪ್ ಫಾಂಟ್ಸ್) ಬಿಡುಗಡೆ ಮಾಡಲಾಗಿದೆ. ಮುಖ್ಯವಾಗಿ ಇವು ತಮಿಳು ನೆಟ್/ತಮಿಳು 99 ಹಾಗೂ ಕೀಬೋರ್ಡ್ ಮೂಲಕ ಮಾಹಿತಿ ಸಂಗ್ರಹಣೆಗೆ ಅನುಕೂಲಕರ.
   
  ಮಾಹಿತಿ ಆಹರಣ, ಪುನರ್ ಪ್ರಾಪ್ತಿ ಹಾಗೂ ಡೀಜೀಟಲೈಸೇಷನ್ ಗಾಗಿ ಸಕಲ ಭಾರತೀಯ ಭಾಷೆಗಳಲ್ಲಿ ಆಪ್ಟಿಕಲ್ ಕ್ಯಾರೆಕ್ಟರ್ ರಿಕಗ್ನಿಷನ್. ಛಂದೋಬದ್ಧವಾಗಿ ಮುದ್ರಿತ ಪುಟಗಳನ್ನು ಸಂಪಾದನಾ ಪುಟಗಳನ್ನಾಗಿ ಪರಿವರ್ತಿಸುವಲ್ಲಿಯೂ ಮತ್ತು ಅನ್ಯ ಉಪಯೋಗಗಳಿಗೆ ಓಸಿಆರ್ ಸಹಾಯಕಾರಿ. ಪ್ರಕಟಣಾ ಸಂಸ್ಥೆಗಳು ಇವುಗಳ ಪ್ರಮುಖ ಫಲಾನುಭವಿಗಳು. ಹಾಗಾಗಿ ಪುನರ್ ಪ್ರಕಟಣಾ ಕಾರ್ಯಗಳಲ್ಲಿ ಈ ಲಘುವರ ಅತ್ಯಂತ ಸಹಾಯಕಾರಿಯಾಗಿದೆ.
   
  ವಾಕ್ ಮುಖಾಮುಖಿ ವ್ಯವಸ್ಥೆಗಳಾದ ರೈಲ್ವೇ ಮಾಹಿತಿ, ಆರೋಗ್ಯ ತಪಾಸಣೆ ಮತ್ತು ಉಪಚಾರ, ವ್ಯವಸಾಯ-ಕೃಷಿ, ಪ್ರಾಕೃತಿಕ ಆಪತ್ ಸ್ಥಿತಿ ಪ್ರಬಂಧನೆ ಹಾಗೂ ಸೇವಾ ಕ್ಷೇತ್ರಗಳು. ಭಾರತೀಯ ಭಾಷಾ ತಂತ್ರಜ್ಞಾನದ ವಿಕಸಿತ ಪ್ರಯೋಜನಗಳು ಸಾರ್ವಜನಿಕರಿಗೆ ಅತೀ ಅನುಕೂಲವಾಗಿವೆ. ವ್ಯವಸ್ಥೆಯೊಡನೆ ಮುಖಾಮುಖಿಯು ಮಾನವ ವಾಣಿಯನ್ನು ಗುರುತಿಸಲೂ, ಅನುವಾದಿಸಲೂ, ಮಾಹಿತಿ ಆಹರಣ ಹಾಗೂ ಲಿಪ್ಯಾಂತರಗೊಳಿಸುವಲ್ಲಿಯೂ ಅನುಕೂಲಕರ. ಮೂಲಪಾಠವನ್ನು ವಾಣಿರೂಪಕ್ಕೆ ಅನುಕರಿಸಿ ದೃಷ್ಠಿಹೀನರಿಗೆ ಇಂಟರ್ ನೆಟ್ ಮೂಲಕ ಮಾಹಿತಿ ಸಂಗ್ರಹಣೆಗೂ ಅನುಕೂಲಕರವಾಗಿವೆ.
   
  ಭಾರತೀಯ ಭಾಷೆಗಳಲ್ಲಿ ಇಂಟರ್ ನೆಟ್ ಅಂಗೀಕಾರ ಸಾಧನಗಳಾದ ಬ್ರವುಸರ್, ಸರ್ಚ್ ಇಂಜಿನ್ ಹಾಗೂ ಇಮೇಲ್ ಇವುಗಳಿಂದಾಗಿ ಇಮೇಲ್ ರವಾನೆ, ವಿನಿಮಯ, ಅನ್ಯ ಭಾರತೀಯ ಭಾಷೆಗಳಲ್ಲಿ ಮಾಹಿತಿ ಅನ್ವೇಷಣೆ ಲಭ್ಯ.
   
  ಆಂಗ್ಲ ಹಾಗೂ ಭಾರತೀಯ ಭಾಷೆಗಳಲ್ಲಿ ಆನ್ ಲಾಯಿನ್ ಸೇವಾ ಸಾಮಗ್ರಿಗಳು. ಅನುಭೋಗಿಗಳಿಗೆ ತಮ್ಮ ಆಯ್ದ ಭಾಷೆಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಮಾಹಿತಿ ಗ್ರಹಣ ಯಾ ಅನುವಾದಕ್ಕೆ ಸಾಧ್ಯ.ಆಂಗ್ಲ ಹಾಗೂ ಭಾರತೀಯ ಭಾಷೆಗಳಲ್ಲಿ ಆನ್ ಲಾಯಿನ್ ಸೇವಾ ಸಾಮಗ್ರಿಗಳು. ಅನುಭೋಗಿಗಳಿಗೆ ತಮ್ಮ ಆಯ್ದ ಭಾಷೆಗಳಲ್ಲಿಯೂ ಆಂಗ್ಲ ಭಾಷೆಯಲ್ಲಿ ಮಾಹಿತಿ ಗ್ರಹಣ ಯಾ ಅನುವಾದಕ್ಕೆ ಸಾಧ್ಯ.
   
ಆನ್ ಲಾಯಿನ್ ಸಹಾಯ ಗವಾಕ್ಷಿಯ ಮೂಲಕ ಈ ಸೇವೆ/ಸಾಧನಗಳು, ಟಿಡಿಐಎಲ್ ಡಿಸಿ ಕೃಪೆಯಿಂದ ಲಭ್ಯ.

ಭಾಷಾ ತಂತ್ರಜ್ಞಾನ ಸೇವಾ ವಿತರಣಾ ವಾಹಿನಿ ಮೂಲಕ ಸಂಶೋಧನಾ ಉತ್ಥಾನ, ಸಾಮಗ್ರೀಕರಣ, ಸಂಸ್ಥಾಪನೆಯೂ ಸಾಧ್ಯ. ಹಾಗಾಗಿ, ಕೆಳಕಂಡ ಸೇವೆಗಳೂ ಸಾಧ್ಯ
   
  ಮಾರುಕಟ್ಟೆಗೆ ತಂತ್ರಜ್ಞಾನದ ಬಿಡುಗಡೆ
   
  ಸಾಮಗ್ರೀಕರಣಕ್ಕೆ ತಂತ್ರಜ್ಞಾನ ನವೀಕರಣ
   
  ಅವಶ್ಯಕತೆ ಆಧಾರಿತ ನವ ತಂತ್ರಜ್ಞಾನಗಳು
   
ಇವೆಲ್ಲವನ್ನೂ ಸಾಕಾರಗೊಳಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ:
  1.ಭಾರತೀಯ ಭಾಷಾ ತಂತ್ರಜ್ಞಾನಗಳು/ಉಪಕರಣಗಳನ್ನು ಟಿಡಿಐಎಲ್ ಮಾಹಿತಿ ಕೇಂದ್ರಗಳ ಮೂಲಕ ಹಂತಹಂತವಾಗಿ ವಿವೇಚನೆಯಿಂದ ವಿತರಣೆ
   
  2.ವಿಕಸಿತ ಸಾಧನಗಳ, ತಂತ್ರಜ್ಞಾನಗಳ, ಸಾಮಗ್ರಿಗಳ ಹಾಗೂ ಸೇವೆಗಳ ಸಂಗ್ರಹಣೆ
   
  3. ಲಭ್ಯವಿರುವ ಸಾಮಗ್ರಿ ಮತ್ತು ತಂತ್ಜ್ಞಾನಗಳ ಮೂಲಕ ಸರ್ಕಾರದ ಪ್ರಯತ್ನ-ಪರಿಶ್ರಮಗಳನ್ನು ಜ್ಞಾನದ ಹರವನ್ನೂ ಹೆಚ್ಚಿಸುವುದು
   
  4. ಉಪಕರಣ, ಸೇವೆ ಹಾಗೂ ಸಾಮಗ್ರಿಗಳ ಉಚಿತ ಡೌನ್ ಲೋಡ್ ಸುಗಮವಾಗಿಸುವುದು
   
  5. ಭಾಷಾ ತಂತ್ರಜ್ಞಾನದಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಗೆ ಉತ್ತೇಜನ ನೀಡುವುದು
   
  6. ನಿರ್ದಿಷ್ಠ ಅಭಿಯಾನ ವಲಯಗಳಲ್ಲಿ ಅಭಿಯಾನ ಆರಂಭಿಸುವುದು
   
 
 

Valid XHTML 1.0 Transitional