ಹೋಂ/ಗೃಹ  |  Language Option  |  ಡೌನ್ ಲೋಡ್  |  ಆಗಾಗಿನ ಸ್ಪಂದನಾ ಪ್ರಶ್ನಾವಳಿ-ಎಫ್ ಎ ಕ್ಯು  |  Help Manual  |  ಸಂಪರ್ಕಿಸಿ (ಹೊಸ ಟೋಲ್‌ ಫ್ರೀ ದೂರವಾಣಿ ಸಂಖ್ಯೆ)  |  Site Map  
 
ಆಗಾಗಿನ ಸ್ಪಂದನಾ ಪ್ರಶ್ನಾವಳಿ (ಎಫ್ ಎ ಕ್ಯು ಸ್)
   
ನನಗೆ ನನ್ನ ಭಾಷೆಯಲ್ಲಿರುವ ತಂತ್ರಾಂಶ ಉಪಕರಣಗಳು ಹಾಗು ತಂತ್ರಜ್ಞಾನಗಳ ಅಗತ್ಯವಿದೆ. ಆದರೆ www.ildc.in ನಲ್ಲಿ ನನಗೆ ಅದರ ಕೊಂಡಿಯು ಕಾಣಿಸುತ್ತಿಲ್ಲ?
ಜಾಲತಾಣದಿಂದ ತಂತ್ರಾಂಶವನ್ನು ನಕಲಿಳಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವೇನು?
ನನ್ನ ಗಣಕದಲ್ಲಿ ತಂತ್ರಾಂಶವನ್ನು ಅನುಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ನನ್ನಲ್ಲಿ ಸೀಡಿ ಇದೆ ?
ನಾನು ನನ್ನ ವಿವರಗಳನ್ನು ಜಾಲತಾಣದಲ್ಲಿ ನೋಂದಾಯಿಸಿದ್ದೇನೆ ಆದರೆ ಇನ್ನೂ ಸಹ ನನಗೆ ಸೀಡಿ ದೊರೆತಿಲ್ಲ. ಇದಕ್ಕೆ ಕಾರಣ ಏನಿರಬಹುದು?
ಸೀಡಿಯು ಉಚಿತವಾಗಿ ದೊರೆಯುತ್ತದೆಯೆ ಅಥವ ಅವುಗಳನ್ನು ಆನ್‌ಲೈನಿನಲ್ಲಿ ಅಥವ ಆಫ್‌ಲೈನಿನಲ್ಲಿ ಖರೀದಿಸಲು ನಾನು ಹಣ ನೀಡಬೇಕಾಗುತ್ತದೆಯೆ ?
ಸೀಡಿಯಲ್ಲಿನ ತಂತ್ರಾಂಶಗಳನ್ನು ಅನುಸ್ಥಾಪಿಸಲು ಏನಾದರೂ ತಾಂತ್ರಿಕ ನೆರವು ಬೇಕಾದಲ್ಲಿ ನಾನು ಏನು ಮಾಡಬೇಕು ?
ಜಾಲತಾಣದಲ್ಲಿ ನೋಂದಾಯಿಸಲು ನನ್ನಿಂದ ಸಾಧ್ಯವಾಗಿಲ್ಲ. ನಾನು ಏನು ಮಾಡಬೇಕು ?
ನನ್ನಲ್ಲಿರುವ ಕಾರ್ಯ ವ್ಯವಸ್ಥೆ ವಿಂಡೋಸ್ ಹಾಗು ಲಿನಕ್ಸ್ ಆಗಿಲ್ಲ . ಈ ತಂತ್ರಾಂಶವು ನನ್ನಲ್ಲಿರುವ ಪ್ಲಾಟ್‌ಫಾರ್ಮಿನಲ್ಲಿ ಕೆಲಸ ಮಾಡುತ್ತದೆಯೆ?
ಬೇರೆ ಬೇರೆ ಭಾಷೆಗಳಲ್ಲಿ ಪ್ರತ್ಯೇಕ ವಿಷಯಗಳ ಪಟ್ಟಿ ಇದೆ. ಬೇರೆ ಭಾಷೆಯಲ್ಲಿರುವ ಆದರೆ ನನ್ನ ಭಾಷೆಯಲ್ಲಿ ಇಲ್ಲದೆ ಇರುವ ತಂತ್ರಾಂಶ / ಸೌಲಭ್ಯವು ನನಗೆ ಬೇಕಿದ್ದಲ್ಲಿ ನಾನು ಏನು ಮಾಡಬೇಕು ?
ಭಾರತೀಯ ಓಪನ್‌ ಆಫೀಸ್ ಎಂದರೇನು ? ಸಾಮಾನ್ಯ ಮನುಷ್ಯನಿಗೆ ಅದರಿಂದಾಗುವ ಪ್ರಯೋಜನಗಳೇನು?
ಫೈರ್ಫಾಕ್ಸ್ ಎಂದರೇನು?
ತಂಡರ್ಬರ್ಡ್ ಎಂದರೇನು?
ಪಿಡ್ಜಿನ್ ಎಂದರೇನು ?
ಸನ್‌ಬರ್ಡ್ ಕ್ಯಾಲೆಂಡರ್ ಅನ್ವಯಿಕವೆಂದರೇನು ?
ಸ್ಕ್ರೈಬಸ್ ಎಂದರೇನು ?
ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂದರೇನು?
ಒಮ್ಮೆ ನಾನು ನನ್ನ ಇಚ್ಛೆಯ ಭಾಷೆಯ ಒತ್ತುಗುಂಡಿಯ ಮೇಲೆ ಕ್ಲಿಕ್‌ ಮಾಡಿದ ನಂತರ, ಪರಿವಿಡಿ / ವಿಷಯಗಳು ಅದೆ ಭಾಷೆಯಲ್ಲಿ ಇರುತ್ತವೆ . ಆದರೆ, ನಾನು ಆ ಭಾಷೆಯನ್ನು ಕಲಿಯುವ ಉದ್ಧೇಶವನ್ನು ಹೊಂದಿರುವುದರಿಂದ, ಉಪಕರಣಗಳನ್ನು / ತಂತ್ರಜ್ಞಾನಗಳನ್ನು ಪಡೆಯಲು ಹೇಗೆ ಮುಂದುವರೆಯಬಹುದಾಗಿದೆ.
ನಾನು ಒಬ್ಬ ಭಾಷಾ ತಂತ್ರಜ್ಞ ಹಾಗು ಅನುವಾದಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಯ ಬಗೆಗೆ ಕಾಲ ಕಾಲಕ್ಕೆ ಮಾಹಿತಿ ದೊರೆಯಬೇಕಿದೆ.
ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನೀಶನ್ (OCR) ಎಲ್ಲಾ ಭಾಷೆಗಳು / ಲಿಪಿಗಳಲ್ಲಿ ಲಭ್ಯವಿದೆಯೆ.
ಹಿಂದಿ ತಂತ್ರಾಂಶ ಉಪಕರಣಗಳಲ್ಲಿರುವ ಟೆಕ್ಸ್ಟ್ ಟು ಸ್ಪೀಚ್ ತಂತ್ರಾಂಶವು ಉತ್ತಮವಾಗಿ ಕೆಲಸ ಮಾಡುತ್ತದೆ. ಇದು ಬೇರೆ ಭಾಷೆಗಳಲ್ಲಿಯೂ ಸಹ ಲಭ್ಯವಿದೆಯೆ?
ತಂತ್ರಾಂಶಗಳನ್ನು ಬಳಸುವಲ್ಲಿ ನನಗೆ ಒಂದು ತೊಂದರೆ ಎದುರಾಗಿದೆ. ನನಗೆ ನೆರವು ಎಲ್ಲಿ ದೊರೆಯುತ್ತದೆ ?
ಈ ಜಾಲತಾಣದಲ್ಲಿನ ಕೆಲವು ಪಠ್ಯಗಳಲ್ಲಿ ನನಗೆ ಕೆಲವು ದೋಷಗಳು ಕಂಡು ಬಂದಿವೆ. ಈ ದೋಷಗಳನ್ನು ನಾನು ಹೇಗೆ ವರದಿ ಮಾಡಲಿ.
ನಾನು ಕೆಲವು ಕಡತಗಳನ್ನು ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗೆ ಅನುವಾದಿಸಲು ಬಯಸುತ್ತೇನೆ. ಇದಕ್ಕಾಗಿ ನನಗೆ ಯಾವುದೆ ತಂತ್ರಾಂಶವು ಕಂಡು ಬರುತ್ತಿಲ್ಲ?
ನಾನು ಈ ತಂತ್ರಾಂಶಗಳನ್ನು ಹಾಗು ಅಕ್ಷರಶೈಲಿಗಳನ್ನು ನನ್ನ ಉತ್ಪನ್ನ ವಿಕಸನೆಗಾಗಿ ಬಳಸಿ ನನ್ನದೆ ಆದ ವಾಣಿಜ್ಯ ಜಾಲತಾಣಕ್ಕಾಗಿ ಬಳಸಬಹುದೆ?
ನಾವು ಒಂದು ಸಂಸ್ಥೆಯಾಗಿದ್ದು ಹಾಗು ಈ ತಂತ್ರಾಂಶ ಉಪಕರಣಗಳನ್ನು ನಮ್ಮ ದೈನಂದಿನ ಕಛೇರಿ ಕೆಲಸಗಳಿಗೆ ಬಳಸಬೇಕಿದೆ. ನಾವು ಇದಕ್ಕಾಗಿನ ತರಬೇತಿಯನ್ನು ಪಡೆಯಬಹುದೆ?
ಸೀಡಿಯಲ್ಲಿ ಒದಗಿಸಲಾದ ತಂತ್ರಾಂಶವನ್ನು ಬಳಸಿಕೊಂಡು ನಾನು ನನ್ನ ಭಾಷೆಯಲ್ಲಿ ಇಮೈಲುಗಳನ್ನು ಕಳುಹಿಸಬಹುದೆ?
ನಾನು ಜಾಲತಾಣದಲ್ಲಿ ನೋಂದಾಯಿಸಿದ್ದೇನೆ ಆದರೆ ಪ್ರವೇಶಪದವನ್ನು ಮರೆತಿದ್ದೇನೆ?
ನಾನು ಭಾರತದಿಂದ ಹೊರಗೆ ವಾಸಿಸುತ್ತಿದ್ದೇನೆ. ನಾನು ಹೇಗೆ ಸೀಡಿಯನ್ನು ಪಡೆದುಕೊಳ್ಳಲಿ ?
   
ನನಗೆ ನನ್ನ ಭಾಷೆಯಲ್ಲಿರುವ ತಂತ್ರಾಂಶ ಉಪಕರಣಗಳು ಹಾಗು ತಂತ್ರಜ್ಞಾನಗಳ ಅಗತ್ಯವಿದೆ. ಆದರೆ www.ildc.in ನಲ್ಲಿ ನನಗೆ ಅದರ ಕೊಂಡಿಯು ಕಾಣಿಸುತ್ತಿಲ್ಲ?
ಉತ್ತರ: ಸಂವಿಧಾನದಲ್ಲಿ ಮಾನ್ಯತೆ ಹೊಂದಿರುವ ಎಲ್ಲಾ 22 ಭಾರತೀಯ ಭಾಷೆಯಲ್ಲಿನ ತಂತ್ರಾಂಶ ಉಪಕರಣಗಳು ಹಾಗು ಅಕ್ಷರಶೈಲಿಗಳ (ಫಾಂಟುಗಳು) ಸೀಡಿಯು ಬಿಡುಗಡೆ ಮಾಡಲಾಗಿದೆ. www.ildc.in / www.ildc.gov.in ಗೆ ನೀವು ಭೇಟಿಕೊಟ್ಟಾಗ ಎಡಭಾಗದಲ್ಲಿ ಬಿಡುಗಡೆಯಾದ ಭಾಷೆಗಳ ಪಟ್ಟಿಯು ಕಾಣಿಸುತ್ತದೆ.
 
ಜಾಲತಾಣದಿಂದ ತಂತ್ರಾಂಶವನ್ನು ನಕಲಿಳಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರವೇನು?
ಉತ್ತರ: ಒದಗಿಸಲಾದ ಕೆಲವು ಉಪಕರಣಗಳ ಗಾತ್ರವು ದೊಡ್ಡದಾಗಿರುತ್ತದೆ ಆದ್ದರಿಂದ ಉತ್ತಮವಾದ ಜಾಲ ಸಂಪರ್ಕ/ ಬ್ಯಾಂಡ್‌ವಿಡ್ತನ್ನು ಹೊಂದುವುದು ಒಳ್ಳೆಯದು. ತಾಳ್ಮೆಯಿಂದಿರಿ, ಅಥವಾ ನೀವು ಬಯಸಿದಲ್ಲಿ info@ildc.in ಗೆ ನಿಮ್ಮ ಪಿನ್‌ ಕೋಡ್‌ನೊಂದಿಗೆ ಸಂಪೂರ್ಣ ಅಂಚೆ ವಿಳಾಸವನ್ನು ವಿ-ಅಂಚೆ ಮಾಡುವ ಮೂಲಕ ಸೀಡಿಯನ್ನು ಪಡೆದುಕೊಳ್ಳಬಹುದಾಗಿದೆ.
 
ನನ್ನ ಗಣಕದಲ್ಲಿ ತಂತ್ರಾಂಶವನ್ನು ಅನುಸ್ಥಾಪಿಸಲು ಸಾಧ್ಯವಾಗುತ್ತಿಲ್ಲ. ನನ್ನಲ್ಲಿ ಸೀಡಿ ಇದೆ ?
ಉತ್ತರ: ಸೀಡಿಯೊಂದಿಗೆ ನೀಡಲಾದ ಕೈಪಿಡಿಯನ್ನು ನೋಡಿ. ಅದರ ಒಂದು ಮೃದು(ಸಾಫ್ಟ್) ಪ್ರತಿಯನ್ನು www.ildc.in / www.ildc.gov.in ತಾಣದಲ್ಲಿ ನೀಡಲಾಗಿದೆ.
 
ನಾನು ನನ್ನ ವಿವರಗಳನ್ನು ಜಾಲತಾಣದಲ್ಲಿ ನೋಂದಾಯಿಸಿದ್ದೇನೆ ಆದರೆ ಇನ್ನೂ ಸಹ ನನಗೆ ಸೀಡಿ ದೊರೆತಿಲ್ಲ. ಇದಕ್ಕೆ ಕಾರಣ ಏನಿರಬಹುದು?
ಉತ್ತರ: ದಯವಿಟ್ಟು ನೀವು ಸರಿಯಾದ ಪಿನ್‌ ಕೋಡ್‌ನೊಂದಿಗೆ ಅಂಚೆ ವಿಳಾಸವನ್ನು ಒದಗಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ಮನವಿಯು ಸಲ್ಲಿಸಲಾದ ಒಂದು ವಾರದ ಒಳಗೆ ಕಳುಹಿಸಲಿಕ್ಕಾಗಿ ಸಿದ್ಧಗೊಳ್ಳುತ್ತದೆ. ಸ್ಥಳಕ್ಕೆ ಅನುಗುಣವಾಗಿ ಅಂಚೆಯ ಸೇವೆಗಳಿಗೆ ಗರಿಷ್ಟ ೮-೧೦ ದಿನಗಳು ತಗುಲಬಹುದು. ಈ ಗರಿಷ್ಟ ಸಮಯದ ನಂತರವೂ ನಿಮಗೆ ಸೀಡಿ ದೊರೆಯದೆ ಇದ್ದಲ್ಲಿ, ಪಿನ್‌ ಕೋಡ್‌ನೊಂದಿಗೆ ವಿವರವಾದ ನಿಮ್ಮ ಅಂಚೆಯ ವಿಳಾಸವನ್ನು info@ildc.in ಗೆ ಕಳುಹಿಸಬಹುದು.
 
ಸೀಡಿಯು ಉಚಿತವಾಗಿ ದೊರೆಯುತ್ತದೆಯೆ ಅಥವ ಅವುಗಳನ್ನು ಆನ್‌ಲೈನಿನಲ್ಲಿ ಅಥವ ಆಫ್‌ಲೈನಿನಲ್ಲಿ ಖರೀದಿಸಲು ನಾನು ಹಣ ನೀಡಬೇಕಾಗುತ್ತದೆಯೆ ?
ಉತ್ತರ: ತಾಣದಲ್ಲಿ ಇರುವ ಎಲ್ಲಾ ತಂತ್ರಾಂಶಗಳು ಹಾಗು ಅಕ್ಷರಶೈಲಿಗಳ(ಫಾಂಟುಗಳ) ಸೀಡಿಯು ಅಂಚೆ ವೆಚ್ಚವೂ ಸೇರಿದಂತೆ ಸಂಪೂರ್ಣ ಉಚಿತವಾಗಿರುತ್ತದೆ.
 
ಸೀಡಿಯಲ್ಲಿನ ತಂತ್ರಾಂಶಗಳನ್ನು ಅನುಸ್ಥಾಪಿಸಲು ಏನಾದರೂ ತಾಂತ್ರಿಕ ನೆರವು ಬೇಕಾದಲ್ಲಿ ನಾನು ಏನು ಮಾಡಬೇಕು ?
ಉತ್ತರ: ತಂತ್ರಾಂಶವನ್ನು ಅನುಸ್ಥಾಪಿಸುವ ಮೊದಲು ಸೀಡಿಯೊಂದಿಗೆ ನೀಡಲಾದ ಕೈಪಿಡಿಯನ್ನು ಸರಿಯಾಗಿ ಓದಿಕೊಳ್ಳಿ. ಅದರ ಒಂದು ಮೃದು(ಸಾಫ್ಟ್) ಪ್ರತಿಯನ್ನು ತಾಣದಲ್ಲಿಯೂ ಸಹ ನೀಡಲಾಗಿದೆ. ಹೆಚ್ಚಿನ ನೆರವಿಗಾಗಿ info@ildc.in ಗೆ ವಿ-ಅಂಚೆಯನ್ನು ಕಳುಹಿಸಿ
 
ಜಾಲತಾಣದಲ್ಲಿ ನೋಂದಾಯಿಸಲು ನನ್ನಿಂದ ಸಾಧ್ಯವಾಗಿಲ್ಲ. ನಾನು ಏನು ಮಾಡಬೇಕು ?
ಉತ್ತರ: ನೀವು ನೋಂದಾಯಿಸಲು ಪ್ರಯತ್ನಿಸುತ್ತಿರುವ ತಾಣದ ಯುಆರ್ಎಲ್ ಜೊತೆಗೆ ಸಂಪೂರ್ಣ ದೋಷ ಸಂದೇಶವನ್ನು info@ildc.in ಗೆ ವಿಅಂಚೆಯಲ್ಲಿ ಕಳುಹಿಸಿ. ಇದರೊಂದಿಗೆ ನೀವು ನೋಂದಣಿಯ ಸಮಯದಲ್ಲಿ ಅನುಸರಿಸಿದ ಹಂತಗಳನ್ನು ಸಹ ಒದಗಿಸಿ. ಇದರಿಂದಾಗಿ ನೋಂದಣಿ ಪುಟದಲ್ಲಿ(ಗಳಲ್ಲಿ) ಯಾವುದೆ ತೊಂದರೆಗಳಿದ್ದಲ್ಲಿ ಅವನ್ನು ಪರಿಹರಿಸಲು ನಮಗೆ ಸಹಾಯವಾಗುತ್ತದೆ.

ನನ್ನಲ್ಲಿರುವ ಕಾರ್ಯ ವ್ಯವಸ್ಥೆ ವಿಂಡೋಸ್ ಹಾಗು ಲಿನಕ್ಸ್ ಆಗಿಲ್ಲ . ಈ ತಂತ್ರಾಂಶವು ನನ್ನಲ್ಲಿರುವ ಪ್ಲಾಟ್‌ಫಾರ್ಮಿನಲ್ಲಿ ಕೆಲಸ ಮಾಡುತ್ತದೆಯೆ?
ಉತ್ತರ: ಭಾಷಾ ಸೀಡಿಗಳಲ್ಲಿ ನೀಡಲಾದ ಉಪಕರಣಗಳು ವಿಂಡೋಸ್ / ಲಿನಕ್ಸಿನಲ್ಲಿ ಬಳಸಲು ಯೋಗ್ಯವಾಗಿದೆ. ಆದರೆ, ಇದು ಕಾರ್ಯವ್ಯವಸ್ಥೆಯ(ಗಳ) ಎಲ್ಲಾ ಆವೃತ್ತಿಗಳಿಗೆ ಅನ್ವಯಿಸದೆ ಇರಬಹುದು. ಅನುಸ್ಥಾಪಿಸುವ ಮೊದಲು ದಯವಿಟ್ಟು ಕೈಪಿಡಿಯನ್ನು ನೋಡಿ.
 
ಬೇರೆ ಬೇರೆ ಭಾಷೆಗಳಲ್ಲಿ ಪ್ರತ್ಯೇಕ ವಿಷಯಗಳ ಪಟ್ಟಿ ಇದೆ. ಬೇರೆ ಭಾಷೆಯಲ್ಲಿರುವ ಆದರೆ ನನ್ನ ಭಾಷೆಯಲ್ಲಿ ಇಲ್ಲದೆ ಇರುವ ತಂತ್ರಾಂಶ / ಸೌಲಭ್ಯವು ನನಗೆ ಬೇಕಿದ್ದಲ್ಲಿ ನಾನು ಏನು ಮಾಡಬೇಕು ?
ಉತ್ತರ: ನಾವು ಎಲ್ಲಾ ಭಾಷೆಗಳಲ್ಲಿಯೂ ಸಹ ಒಂದೆ ರೀತಿಯ ವಿಷಯಗಳನ್ನು ಹೊಂದಿರುವಂತೆ ನೋಡಿಕೊಂಡಿದ್ದೇವೆ, ಆದರೂ ಸಹ ಒಂದು ಭಾಷೆಯಲ್ಲಿ ಇರುವ ನಿಶ್ಚಿತ ಉಪಕರಣಗಳು ಇನ್ನೊಂದು ಭಾಷೆಯಲ್ಲಿ ಇಲ್ಲದೆ ಇರಬಹುದು. ಪ್ರತಿಯೊಂದು ಭಾಷೆಯಲ್ಲಿ ಒಳಗೊಳ್ಳಿಸಲಾದ ವಿಷಯಗಳನ್ನು ಪ್ರತ್ಯೇಕ ಪಟ್ಟಿಮಾಡಲಾಗಿದೆ.

ಭಾರತೀಯ ಓಪನ್‌ ಆಫೀಸ್ ಎಂದರೇನು ? ಸಾಮಾನ್ಯ ಮನುಷ್ಯನಿಗೆ ಅದರಿಂದಾಗುವ ಪ್ರಯೋಜನಗಳೇನು?
ಉತ್ತರ: ಭಾರತೀಯOO ಸೂಟ್ ಮುಖ್ಯವಾಗಿ ಒಂದು ಪದ ಸಂಸ್ಕಾರಕ ಅನ್ವಯಿಕ (ರೈಟರ್), ಒಂದು ಲೆಕ್ಕದ ಹಾಳೆ ಅನ್ವಯಿಕ (ಕ್ಯಾಲ್ಕ್), ಒಂದು ಪ್ರಸ್ತುತಿ ಅನ್ವಯಿಕ (ಇಂಪ್ರೆಸ್), ಹಾಗು ಒಂದು ಚಿತ್ರರಚನಾ ಅನ್ವಯಿಕವನ್ನು(ಡ್ರಾ) ಹೊಂದಿದೆ. ಭಾರತೀಯOO ಸೂಟ್ ಎನ್ನುವುದು ಓಪನ್ ಆಫೀಸ್‌ನ ಒಂದು ಕಸ್ಟಮೈಸ್ ಆವೃತ್ತಿಯಾಗಿದ್ದು, ಅದರಲ್ಲಿನ ಎಲ್ಲಾ ಪರಿವಿಡಿಗಳು, ಸ್ಥಿತಿ ಪಟ್ಟಿಕೆಗಳು, ಬಳಕೆದಾರ ಪ್ರಾಂಪ್ಟುಗಳು ಹಾಗು ಇತ್ಯಾದಿಗಳನ್ನು ಭಾರತೀಯ ಭಾಷೆಗಳಿಗೆ ಅನುವಾದಿಸಲಾಗಿದೆ. ಪ್ರತಿಯೊಂದು ಭಾರತೀಯOO ಅನ್ವಯಿಕಗಳಲ್ಲಿಯೂ ಸಹ ಒಂದು ಸಹಾಯದ ಪರಿವಿಡಿ ಇರುತ್ತದೆ. ಇದರಲ್ಲಿರುವ ಭಾರತೀಯ ಭಾಷೆ ಗಳಲ್ಲಿನ ಸಹಾಯದ ಆಯ್ಕೆಗಳನ್ನು ಅನ್ವಯಿಕದ ಹಲವಾರು ಉಪಕರಣಗಳು ಹಾಗು ಆದೇಶಗಳಿಗಾಗಿ ಸಹಾಯವನ್ನು ಪಡೆದುಕೊಳ್ಳಲು ಬಳಸಬಹುದಾಗಿದೆ.
 
ಫೈರ್ಫಾಕ್ಸ್ ಎಂದರೇನು?
ಉತ್ತರ: ಫೈರ್ಫಾಕ್ಸ್ ಎಂಬುದು ಮೋಝಿಲ್ಲಾದಿಂದ ಅಭಿವೃದ್ಧಿಪಡಿಸಲಾದ, ಮುಕ್ತ-ಆಕರದ, ವಿಂಡೋಸ್, ಲಿನಕ್ಸ್, ಹಾಗು ಮ್ಯಾಕ್ OS X ಗಾಗಿನ ಜಾಲ ವೀಕ್ಷಕವಾಗಿದೆ . ಇದರ ಇತ್ತೀಚಿನ ಒಂದು ಆವೃತ್ತಿಯನ್ನು ಫೈರ್ಫಾಕ್ಸ್ ಜಾಲತಾಣದಿಂದ ನಕಲಿಳಿಸಿಕೊಳ್ಳಬಹುದಾಗಿದೆ. ಭಾರತೀಯ ಭಾಷೆಗಳಲ್ಲಿರುವ ಫೈರ್ಫಾಕ್ಸಿನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ತಂಡರ್ಬರ್ಡ್ ಎಂದರೇನು?
ಉತ್ತರ: ತಂಡರ್ಬರ್ಡ್ ಎನ್ನುವುದು ವಿಂಡೋಸ್, ಲಿನಕ್ಸ್, ಹಾಗು ಮ್ಯಾಕಿಂಟೋಶ್ ಮುಂತಾದ ಹೆಚ್ಚಿನ ಕಾರ್ಯವ್ಯವಸ್ಥೆಗಳಲ್ಲಿ ಬಳಸಲಾಗುವ ಉಚಿತ, ಮುಕ್ತ-ಆಕರ ಹಾಗು ಕ್ರಾಸ್-ಪ್ಲಾಟ್‌ಫಾರ್ಮ್ ಅಂಚೆ ಗ್ರಾಹಕವಾಗಿದೆ. ಇದು ಮೋಝಿಲ್ಲಾದ ಕೋಡ್‌ಬೇಸ್‌ನ ಮೇಲೆ ಆಧಾರಿತವಾಗಿದೆ. ಇದು ಒಂದು ಸದೃಢ ಹಾಗು ಸುಲಭವಾಗಿ ಬಳಸಲಾದಂತಹ ಒಂದು ಗ್ರಾಹಕವಾಗಿದ್ದು,ಇದರ ಪ್ರತಿಸ್ಪರ್ಧಿ ಉತ್ಪನ್ನಗಳಾದಂತಹ ಔಟ್‌ಲುಕ್ ಎಕ್ಸಪ್ರೆಸ್‌ ಅನ್ನು ಹೋಲುವಂತಿದ್ದರೂ ಸಹ ರದ್ದಿ ಅಂಚೆ ವರ್ಗೀಕರಣದಂತಹ ಪ್ರಮುಖ ಅನುಕೂಲವನ್ನು ಹೊಂದಿದೆ. ಸ್ಥಳೀಯ ಭಾಷೆಯ ಆವೃತ್ತಿಯ ತಂಡರ್ಬರ್ಡ್ ಅನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ಪಿಡ್ಜಿನ್ ಎಂದರೇನು ?
ಉತ್ತರ: ಪಿಡ್ಜಿನ್ ಒಂದು ಲಕ್ಷಾಂತರ ಜನರಿಂದ ಬಳಸಲಾಗುತ್ತಿರುವ ಬಳಕೆಗೆ ಸುಲಭವಾದ ಹಾಗು ಉಚಿತವಾದ ಹರಟೆಯ ಹೊಡೆಯುವ ಗ್ರಾಹಕವಾಗಿದೆ. ಏಐಎಮ್, ಎಮ್‌ಎಸ್‌ಎನ್, ಯಾಹೂ, ಹಾಗು ಬಹಳಷ್ಟು ಹರಟೆ ಜಾಲಬಂಧಗಳೊಂದಿಗೆ ಏಕಕಾಲಕ್ಕೆ ನೀವು ಸಂಪರ್ಕ ಹೊಂದಬಹುದಾಗಿದೆ. ಭಾರತೀಯ ಭಾಷೆಯ ಅನುವಾದಿಸಲಾದ ಪಿಡ್ಜಿನ್‌ನ ಆವೃತ್ತಿಯನ್ ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ಸನ್‌ಬರ್ಡ್ ಕ್ಯಾಲೆಂಡರ್ ಅನ್ವಯಿಕವೆಂದರೇನು ?
ಉತ್ತರ: ಮೋಝಿಲ್ಲಾ ಸನ್‌ಬರ್ಡ್ ಒಂದು ಕ್ರಾಸ್-ಪ್ಲಾಟ್‌ಫಾರ್ಮ್ ಕ್ಯಾಲೆಂಡರ್ ಅನ್ವಯಿಕವಾಗಿದ್ದು, ಮೋಝಿಲ್ಲಾ ಟೂಲ್‌ಕಿಟ್‌ನ ಮೇಲೆ ನಿರ್ಮಿತಗೊಂಡಿದೆ. ಬಳಕೆದಾರರಿಗೆ ಸಂಪೂರ್ಣ ಸವಲತ್ತನ್ನು ಹೊಂದಿರುವ ಹಾಗು ಬಳಕೆಗೆ ಸುಲಭವಾಗಿರುವಂತಹ ಕ್ಯಾಲೆಂಡರ್ ಅನ್ವಯಿಕವಾಗಿದ್ದು, ಇದನ್ನು ನೀವು ಜಗತ್ತಿನಾದ್ಯಂತ ಬಳಸಬಹುದಾಗಿದೆ. ಇದು ಸಂಪೂರ್ಣವಾಗಿ ಪ್ರತ್ಯೇಕವಾಗಿದೆ: ಇದಕ್ಕೆ ಬೇರಾವುದೆ ಅನ್ವಯಿಕಗಳ ಅಗತ್ಯವಿರುವುದಿಲ್ಲ, ಆದರೆ ಬೇರಾವುದೆ ಕ್ರಮವಿಧಿಗಳೊಂದಿಗೆ ಹೊಂದಿಕೊಳ್ಳುವುದಿಲ್ಲ. ಸ್ಥಳೀಯ ಭಾಷೆಯ ಆವೃತ್ತಿಯ ಮೋಝಿಲ್ಲಾ ಸನ್‌ಬರ್ಡ್ ಅನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ಸ್ಕ್ರೈಬಸ್ ಎಂದರೇನು ?
ಉತ್ತರ: ಸ್ಕ್ರೈಬಸ್ ಒಂದು ಮುಕ್ತ-ಆಕರ ಕ್ರಮವಿಧಿಯಾಗಿದ್ದು "ಮುದ್ರಣ-ಸಿದ್ಧ" ಉತ್ಪನ್ನ ಹಾಗು ಪುಟ ವಿನ್ಯಾಸಕ್ಕೆ ಹೊಸ ಆಯಾಮವನ್ನು ನೀಡುವ ಸಂಯೋಜನೆಯಾದಂತಹ ಇದು ಲಿನಕ್ಸ್/ಯುನಿಕ್ಸ್, ಮ್ಯಾಕ್‌ಓಎಸ್ ಎಕ್ಸ್, ಓಎಸ್/೨ ಹಾಗು ವಿಂಡೋಸ್ ಗಣಕತೆರೆಗಳಲ್ಲಿ ಬಳಸಲಾಗುವ ಪ್ರಶಸ್ತಿ-ವಿಜೇತವಾದ ವೃತ್ತಿಪರವಾದ ಪುಟ ವಿನ್ಯಾಸಗಾರವಾಗಿದೆ. ನವೀನವಾದ ಹಾಗು ಬಳಕೆದಾರ ಸ್ನೇಹಿಯಾದ ಸಂಪರ್ಕಸಾಧನವನ್ನು ಹೊಂದಿರುವ ಸ್ಕ್ರೈಬಸ್ ವೃತ್ತಿಪರವಾದ ಪ್ರಕಟಣಾ ಸೌಲಭ್ಯಗಳನ್ನು ಬೆಂಬಲಿಸುತ್ತದೆ, ಅವುಗಳೆಂದರೆ ಸಿಎಮ್‌ವೈಕೆ ಬಣ್ಣ, ವಿಭಜನೆಗಳು, ಐಸಿಸಿ ಬಣ್ಣ ನಿರ್ವಹಣೆ ಹಾಗು ಕುಶಲ PDF ರಚನೆಯಾಗಿವೆ. ಭಾರತೀಯ ಭಾಷೆಯ ಅನುವಾದಿಸಲಾದ ಸ್ಕ್ರೈಬಸ್‌ನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎಂದರೇನು?
ಉತ್ತರ: ಕಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಎನ್ನುವುದು ಒಂದು ಸಾಮಾನ್ಯವಾದ, ಪ್ರಶಸ್ತವಾದ, ಪ್ರಕ್ರಿಯೆಯಿಂದ-ಚಾಲಿತಗೊಂಡಂತಹ ತಂತ್ರಾಂಶ ಆಧರಿತವಾಗಿದ್ದು , ಇ-ಸಮುದಾಯಗಳ ರೂಪದಲ್ಲಿ ಕಮ್ಯುನಿಟಿ ಇನ್‌ಫಾರ್ಮೇಶನ್ ಸಿಸ್ಟಮ್ಸ್ (CIS) ಅಥವ ಸೋಶಿಯಲ್ ಇನ್‌ಫಾರ್ಮೇಶನ್ ಸಿಸ್ಟಮ್ಸ್ (SIS) ಅನ್ನು ಸ್ಥಾಪಿಸುವ ರಚನೆಯಾಗಿದೆ. ಇದು ಇ-ಸಮುದಾಯಗಳ ಸದಸ್ಯರುಗಳು ಪರಸ್ಪರ ರಚಿಸಲು, ಬಳಸಲು ಹಾಗು ಹಂಚಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಭಾರತೀಯ ಭಾಷೆಯ ಅನುವಾದಿಸಲಾದ ಸಿಎಮ್‌ಎಸ್‌ನ ಆವೃತ್ತಿಯನ್ನು ಪ್ರತಿಯೊಂದು ಭಾಷಾ ಸೀಡಿಯಲ್ಲಿಯೂ ಸಹ ಒಳಗೊಳ್ಳಿಸಲಾಗಿದೆ.
 
ಒಮ್ಮೆ ನಾನು ನನ್ನ ಇಚ್ಛೆಯ ಭಾಷೆಯ ಒತ್ತುಗುಂಡಿಯ ಮೇಲೆ ಕ್ಲಿಕ್‌ ಮಾಡಿದ ನಂತರ, ಪರಿವಿಡಿ / ವಿಷಯಗಳು ಅದೆ ಭಾಷೆಯಲ್ಲಿ ಇರುತ್ತವೆ . ಆದರೆ, ನಾನು ಆ ಭಾಷೆಯನ್ನು ಕಲಿಯುವ ಉದ್ಧೇಶವನ್ನು ಹೊಂದಿರುವುದರಿಂದ, ಉಪಕರಣಗಳನ್ನು / ತಂತ್ರಜ್ಞಾನಗಳನ್ನು ಪಡೆಯಲು ಹೇಗೆ ಮುಂದುವರೆಯಬಹುದಾಗಿದೆ.
ಉತ್ತರ: ಉಪಕರಣ ಸಲಹೆಗಳನ್ನು ಆಂಗ್ಲ ಭಾಷೆಯಲ್ಲಿ ನೀಡಲಾಗಿದ್ದರೂ ಸಹ, ನೀವು ಬಯಸಿದಲ್ಲಿ info@ildc.in ಗೆ ನಿಮ್ಮ ಪಿನ್‌ ಕೋಡ್‌ನೊಂದಿಗೆ ಸಂಪೂರ್ಣ ಅಂಚೆ ವಿಳಾಸವನ್ನು ವಿ-ಅಂಚೆ ಮಾಡುವ ಮೂಲಕ ಸೀಡಿಯನ್ನು ಪಡೆದುಕೊಳ್ಳಬಹುದಾಗಿದೆ.
 
ನಾನು ಒಬ್ಬ ಭಾಷಾ ತಂತ್ರಜ್ಞ ಹಾಗು ಅನುವಾದಕನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಭಾಷಾ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಬೆಳವಣಿಗೆಯ ಬಗೆಗೆ ಕಾಲ ಕಾಲಕ್ಕೆ ಮಾಹಿತಿ ದೊರೆಯಬೇಕಿದೆ.
ಉತ್ತರ: ಇತ್ತೀಚಿನ ಬೆಳವಣಿಗೆಗಾಗಿ www.cdac.in/gist ಗೆ ಭೇಟಿ ಕೊಡಿ
 
ಉತ್ತರ: ಇತ್ತೀಚಿನ ಬೆಳವಣಿಗೆಗಾಗಿ www.cdac.in/gist ಗೆ ಭೇಟಿ ಕೊಡಿ
ಉತ್ತರ: ಪ್ರಸಕ್ತ ಓಸಿಆರ್ ಕೇವಲ ಕೆಲವು ಭಾಷೆಗಳಲ್ಲಿ ಮಾತ್ರವೆ ಲಭ್ಯವಿದೆ, ಅವೆಂದರೆ ಹಿಂದಿ, ಮರಾಠಿ, ಮಲೆಯಾಳಂ, ಹಾಗು ಪಂಜಾಬಿ ಆಗಿವೆ. ದಯವಿಟ್ಟು ಪ್ರತ್ಯೇಕ ಭಾಷೆಗಳಿಗಾಗಿ ಉಪಕರಣ ಪಟ್ಟಿಯನ್ನು ನೋಡಿ.
 
ಹಿಂದಿ ತಂತ್ರಾಂಶ ಉಪಕರಣಗಳಲ್ಲಿರುವ ಟೆಕ್ಸ್ಟ್ ಟು ಸ್ಪೀಚ್ ತಂತ್ರಾಂಶವು ಉತ್ತಮವಾಗಿ ಕೆಲಸ ಮಾಡುತ್ತದೆ. ಇದು ಬೇರೆ ಭಾಷೆಗಳಲ್ಲಿಯೂ ಸಹ ಲಭ್ಯವಿದೆಯೆ?
ಉತ್ತರ: ಪ್ರಸಕ್ತ ಟಿಟಿಎಸ್ ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯವಿದೆ. ಆದರೆ, ದಯವಿಟ್ಟು ಪ್ರತ್ಯೇಕ ಭಾಷೆಗಳಿಗಾಗಿ ಉಪಕರಣ ಪಟ್ಟಿಯನ್ನು ನೋಡಿ.

ತಂತ್ರಾಂಶಗಳನ್ನು ಬಳಸುವಲ್ಲಿ ನನಗೆ ಒಂದು ತೊಂದರೆ ಎದುರಾಗಿದೆ. ನನಗೆ ನೆರವು ಎಲ್ಲಿ ದೊರೆಯುತ್ತದೆ ?
ಉತ್ತರ : ನೀವು ಬಯಸಿದಲ್ಲಿ ಒದಗಿಸಲಾದ ಕೈಪಿಡಿಯನ್ನು ನೋಡಬಹುದು. ಆದರೂ ಸಹ ತೊಂದರೆ ಪರಿಹಾರಗೊಳ್ಳದೆ ಹೋದಲ್ಲಿ ಅದನ್ನು info@ildc.in ಗೆ ಬರೆದು ತಿಳಿಸಬಹುದು. ತೊಂದರೆಯನ್ನು ಪರಿಹರಿಸಲು ನಾವು ಕೈಲಾದ ಪ್ರಯತ್ನ ಮಾಡುತ್ತೇವೆ.
 
ಈ ಜಾಲತಾಣದಲ್ಲಿನ ಕೆಲವು ಪಠ್ಯಗಳಲ್ಲಿ ನನಗೆ ಕೆಲವು ದೋಷಗಳು ಕಂಡು ಬಂದಿವೆ. ಈ ದೋಷಗಳನ್ನು ನಾನು ಹೇಗೆ ವರದಿ ಮಾಡಲಿ.
ಉತ್ತರ: ಅನುವಾದಗಳು ಸ್ವಭಾವತಃ ವಸ್ತುನಿಷ್ಟವಾಗಿರುತ್ತವೆಯಾದ್ದರಿಂದ ಅದು 100% ನಿಖರವಾಗಿದೆಯೆಂದು ನಾವು ಘೋಷಿಸುವುದಿಲ್ಲ. ನೀವು ದೋಷಗಳ ಸಂಪೂರ್ಣ ವಿವರಗಳೊಂದಿಗೆ info@ildc.in ಗೆ ಇಮೈಲನ್ನು ಕಳುಹಿಸುವುದು ನಿಜಕ್ಕೂ ಪ್ರಶಂಸನೀಯ.

ನಾನು ಕೆಲವು ಕಡತಗಳನ್ನು ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗೆ ಅನುವಾದಿಸಲು ಬಯಸುತ್ತೇನೆ. ಇದಕ್ಕಾಗಿ ನನಗೆ ಯಾವುದೆ ತಂತ್ರಾಂಶವು ಕಂಡು ಬರುತ್ತಿಲ್ಲ?
ಉತ್ತರ: ಪ್ರಸಕ್ತ, ಭಾಷಾ ಸೀಡಿಗಳು ಯಾಂತ್ರಿಕ ಅನುವಾದಗಳ ವ್ಯವಸ್ಥೆಯನ್ನು ಹೊಂದಿಲ್ಲ.
 
ನಾನು ಈ ತಂತ್ರಾಂಶಗಳನ್ನು ಹಾಗು ಅಕ್ಷರಶೈಲಿಗಳನ್ನು ನನ್ನ ಉತ್ಪನ್ನ ವಿಕಸನೆಗಾಗಿ ಬಳಸಿ ನನ್ನದೆ ಆದ ವಾಣಿಜ್ಯ ಜಾಲತಾಣಕ್ಕಾಗಿ ಬಳಸಬಹುದೆ?
ಉತ್ತರ: ಒದಗಿಸಲಾದ ಎಲ್ಲಾ ತಂತ್ರಾಂಶ ಉಪಕರಣಗಳು ಹಾಗು ಅಕ್ಷರಶೈಲಿಗಳು ವಾಣಿಜ್ಯೇತರ ಉದ್ಧೇಶಕ್ಕೆ ಮಾತ್ರವೆ ಬಳಸಬಹುದಾಗಿದೆ.
 
ನಾವು ಒಂದು ಸಂಸ್ಥೆಯಾಗಿದ್ದು ಹಾಗು ಈ ತಂತ್ರಾಂಶ ಉಪಕರಣಗಳನ್ನು ನಮ್ಮ ದೈನಂದಿನ ಕಛೇರಿ ಕೆಲಸಗಳಿಗೆ ಬಳಸಬೇಕಿದೆ. ನಾವು ಇದಕ್ಕಾಗಿನ ತರಬೇತಿಯನ್ನು ಪಡೆಯಬಹುದೆ?
ಉತ್ತರ: ಎಲ್ಲಾ ತಂತ್ರಾಂಶ ಉಪಕರಣಗಳು ಹಾಗು ಅಕ್ಷರಶೈಲಿಗಳು ವಾಣಿಜ್ಯೇತರ ಉದ್ಧೇಶಕ್ಕೆ ಮಾತ್ರವೆ ಬಳಸಬಹುದಾಗಿದೆ. ತರಬೇತಿ ಮನವಿಯನ್ನು ಪ್ರತ್ಯೇಕವಾಗಿ ಕಳುಹಿಸಬಹುದಾಗಿದೆ.
 
ಸೀಡಿಯಲ್ಲಿ ಒದಗಿಸಲಾದ ತಂತ್ರಾಂಶವನ್ನು ಬಳಸಿಕೊಂಡು ನಾನು ನನ್ನ ಭಾಷೆಯಲ್ಲಿ ಇಮೈಲುಗಳನ್ನು ಕಳುಹಿಸಬಹುದೆ?
ಉತ್ತರ: ಇಮೈಲ್ ಗ್ರಾಹಕವು ಯೂನಿಕೋಡ್ ಅನ್ನು ಬೆಂಬಲಿಸುತ್ತಿದ್ದಲ್ಲಿ ನೀವು ನಿಮ್ಮ ಭಾಷೆಯಲ್ಲಿ ಇಮೈಲುಗಳನ್ನು ಕಳುಹಿಸಬಹುದಾಗಿದೆ. ಸಂದೇಶವನ್ನು ಟೈಪಿಸಲು ನೀವು ಯೂನಿಕೋಡ್ ಟೈಪಿಂಗ್ ಉಪಕರಣಗಳನ್ನು ಬಳಸಬಹುದು.
 
ನಾನು ಜಾಲತಾಣದಲ್ಲಿ ನೋಂದಾಯಿಸಿದ್ದೇನೆ ಆದರೆ ಪ್ರವೇಶಪದವನ್ನು ಮರೆತಿದ್ದೇನೆ?
ಉತ್ತರ: ನಿಮ್ಮ ಪ್ರವೇಶಪದವನ್ನು ಮರೆತುಬಿಡಿ ಪುಟಕ್ಕೆ ಭೇಟಿಕೊಡಿ ಹಾಗು ನೀವು ನೋಂದಾಯಿಸುವ ಸಮಯದಲ್ಲಿ ಒದಗಿಸಿದ ಬಳಕೆದಾರ ಐಡಿಯ ಜೊತೆಗೆ ಇಮೈಲ್ ಐಡಿಯನ್ನು ನಮೂದಿಸಿ. ಪ್ರವೇಶಪದವನ್ನು ನಿಮ್ಮ ಇಮೈಲ್ ಐಡಿಗೆ ಕಳುಹಿಸಲಾಗುವುದು.
 
ನಾನು ಭಾರತದಿಂದ ಹೊರಗೆ ವಾಸಿಸುತ್ತಿದ್ದೇನೆ. ನಾನು ಹೇಗೆ ಸೀಡಿಯನ್ನು ಪಡೆದುಕೊಳ್ಳಲಿ ?
ಉತ್ತರ : ಹೌದು, ನಾವು ಭಾರತದಿಂದ ಹೊರಗಡೆಯೂ ಸಹ ಕಳುಹಿಸುತ್ತೇವೆ.